top of page

ಗಂಗಾ ನದಿಯಲ್ಲಿ ಮಿಂದು ವೈವಾಹಿಕ ಸಂಬಂಧಕ್ಕೆ 'ತಿಥಿ' ಮಾಡಿದ ಗಂಡಸರು - Dailyhunt


ವಾರಾಣಸಿ (ಉತ್ತರ ಪ್ರದೇಶ), ಆಗಸ್ಟ್ 15: ಸ್ತ್ರೀವಾದದ ವಿರುದ್ಧ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದ ಘಟನೆ ವಾರಾಣಸಿಯ ಮಣಿಕರ್ಣಿಕಾ ಘಟ್ಟದಲ್ಲಿ ವರದಿಯಾಗಿದೆ. ಸ್ತ್ರೀವಾದದ ವಿರುದ್ಧ ಪ್ರತಿಭಟನೆ ನಡೆಸಿದವರು ಪುರುಷರು. ಇವರಿಗೆ ಅದೇನು ಸಿಟ್ಟಿತ್ತೋ ತಮ್ಮ 'ವೈವಾಹಿಕ ಸಂಬಂಧ'ದ ಅಂತ್ಯಕ್ರಿಯೆ ಮಾಡಿ, ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ದೇಶದ ನಾನಾ ಭಾಗಗಳಿಂದ ಬಂದಿದ್ದ ನೂರೈವತ್ತು ಮಂದಿ ಮಣಿಕರ್ಣಿಕಾ ಸ್ನಾನ ಘಟ್ಟದ ಬಳಿ ಜಮೆಯಾಗಿದ್ದಾರೆ. ಆ ನಂತರ ಗಂಗಾ ನದಿಯಲ್ಲಿ ಸ್ನಾನ ಮುಗಿಸಿ, ಅವರ ವೈವಾಹಿಕ ಸಂಬಂಧದ 'ತಿಥಿ' ಮಾಡಿದ್ದಾರೆ.

ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಅಮಿತ್ ದೇಶಪಾಂಡೆ ಮಾತನಾಡಿ, ನಮಗೆ ಈ ಸಮಾಜ ಮತ್ತೆ ಹಳೇ ಪದ್ಧತಿಗೆ ಹೋಗಬೇಕು ಎಂಬ ನಿರೀಕ್ಷೆ ಇಲ್ಲ. ಆದರೆ ನಾವು ಸಮಾನತೆಯನ್ನು ಬೆಂಬಲಿಸುತ್ತೇವೆ. ಆದರೆ ಇವತ್ತು ಸಮಾಜದಲ್ಲಿರುವ ಸ್ತೀವಾದವು ಸಮಾನತೆಯ ಮೂಲ ಆಶಯದಿಂದಲೇ ದೂರ ಮಾಡುತ್ತಿದೆ ಎಂದು ಹೇಳಿದ್ದಾರೆ.

ಆ ಕಾರಣಕ್ಕೆ ಈಗ ಬದಲಾವಣೆ ಆಗಿರುವ ಸ್ತ್ರೀವಾದದ ಅಂತ್ಯಸಂಸ್ಕಾರ ನಡೆಸಿದ್ದೇವೆ. ಈಗ ಎಲ್ಲದರಲ್ಲೂ ನಾವು ಸಮಾನತೆ ಬಯಸುತ್ತೇವೆ. ಪೂರ್ವಗ್ರಹ ಪೀಡಿತ ಹಾಗೂ ಅಸಮಾನತೆಯ ಅಂತ್ಯಕ್ರಿಯೆ ಮಾಡಿದ್ದೇವೆ ಎಂದಿದ್ದಾರೆ.

ಈ ಪ್ರತಿಭಟನೆಯನ್ನು ಆಯೋಜಿಸಿದ್ದ ಸೇವ್ ಇಂಡಿಯನ್ ಫ್ಯಾಮಿಲಿ ಹಾಗೂ ದಾಮನ್ ವೆಲ್ ಫೇರ್ ಸೊಸೈಟಿಯ ಅನುಪಮ್ ದುಬೆ ಮಾತನಾಡಿ, ನಾವು ಪುರುಷರ ಹಕ್ಕುಗಳಿಗಾಗಿ ಹೋರಾಡುತ್ತಿದ್ದೇವೆ. ಗಂಡಸರ ವಿರುದ್ಧ ಪೂರ್ವಗ್ರಹಗಳಿವೆ. ಈ ರೀತಿ ಸ್ತ್ರೀವಾದದಿಂದ ಹಲವು ಕುಟುಂಬಗಳು ಹಾಳಾಗಿವೆ. ನಾವು ಅದಕ್ಕೆ ವಿರುದ್ಧವಾಗಿದ್ದೇವೆ. ಸಮಾನತೆ ಅಂದರೆ ಸಮಾನತೆ ಎಂದಿದ್ದಾರೆ.

ವರದಕ್ಷಿಣೆ, ಮಹಿಳೆಯರ ವಿರುದ್ಧ ದೌರ್ಜನ್ಯದ ಸುಳ್ಳು ಪ್ರಕರಣಗಳು ದೊಡ್ಡ ಸಂಖ್ಯೆಯಲ್ಲಿ ದೇಶಾದ್ಯಂತ ದಾಖಲಾಗುತ್ತಿವೆ. ಅಂಥ ಪ್ರಕರಣಗಳು ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ದಾಖಲಾಗಿವೆ. ಆ ರೀತಿ ಸುಳ್ಳು ಪ್ರಕರಣಗಳಿಗೆ ಬಲಿಯಾದವರು ಇಂದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ದುಬೆ ಹೇಳಿದರು.

Source, here.

0 comments
bottom of page